Bigg Boss Kannada 5: Week 9: Diwakar, Sameer Acharya, Jaya Srinivasan, Shruti Prakash, Chandan Shetty, Jagan are nominated for this week's elimination.
'ಬಿಗ್ ಬಾಸ್' 9ನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸ್ಪರ್ಧಿಗಳಿಗೆ ಬಹುದೊಡ್ಡ ಶಾಕ್ ಎದುರಾಗಿದೆ. ಮನೆ ಸದಸ್ಯರ ನಿರೀಕ್ಷೆಯಂತೆ ಈ ವಾರ ನಾಮಿನೇಷನ್ ಪ್ರಕ್ರಿಯೆ ಆಗಲಿಲ್ಲ. ಎಲ್ಲರೂ ಯೋಚನೆ ಮಾಡಿದ್ದೇ ಒಂದು ಆದ್ರೆ, ಅಲ್ಲಿ ಆಗಿದ್ದೇ ಒಂದು. ಈ ವಾರ ಯಾರು ನಾಮಿನೇಟ್ ಆಗಬಹುದು. ಯಾರೂ ಯಾರಿಗೆ ವೋಟ್ ಹಾಕಬೇಕು ಎಂದು ಮೊದಲೇ ನಿರ್ಧಾರ ಮಾಡಿ ಸಿದ್ದವಾಗಿದ್ದರು. ಆದ್ರೆ, ಬಿಗ್ ಬಾಸ್ ಎಲ್ಲರ ಲೆಕ್ಕಾಚಾರವನ್ನ ಉಲ್ಟಾ ಮಾಡಿಬಿಟ್ಟರು. ತಮಗೆ ತಾವೇ ನಾಮಿನೇಟ್ ಮಾಡಿಕೊಳ್ಳುವಂತಹ ಸಂದರ್ಭಕ್ಕೆ ತಂದುಬಿಟ್ಟರು. ಹಾಗಿದ್ರೆ, ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿರುವುದು ಯಾರು? ನಾಮಿನೇಷನ್ ಗೆ ಮೊದಲು ಜೋಡಿ ಟಾಸ್ಕ್ ನೀಡಿದರು. ಇಬ್ಬರನ್ನ ಒಂದು ಜೋಡಿಯಾಗಿಸಿ ಅವರ ಕೈಗೆ ಬೇಡಿ ಹಾಕಿದರು. ಈ ವಾರ ಪೂರ್ತಿ ಇಬ್ಬರು ಜೋಡಿಯಾಗಿ ಟಾಸ್ಕ್ ಮಾಡಬೇಕು ಎಂಬ ಸೂಚನೆ ಸಿಕ್ಕುವಷ್ಟರಲ್ಲಿ, ನಾಮಿನೇಷನ್ ಕೂಡ ಇಬ್ಬರು ಸೇರಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಬಿಗ್ ಬಾಸ್ ಸೂಚಿಸಿದರು. ಆದ್ರೆ, ಬೇರೆಯವರನ್ನ ನಾಮಿನೇಟ್ ಮಾಡುವಂತಿಲ್ಲ. ಅವರಿಬ್ಬರಲ್ಲಿ ಒಬ್ಬರನ್ನ ತಾವೇ ನಾಮಿನೇಟ್ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.